Untitled Document
Sign Up | Login    
Dynamic website and Portals
  

Related News

ಕಪ್ಪು ಹಣ ಘೋಷಣೆ: 65,250 ಕೋಟಿ ರೂ ಸರ್ಕಾರದ ಬೊಕ್ಕಸಕ್ಕೆ

ಕಪ್ಪು ಹಣ ಘೋಷಣೆಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವಿನ ಒಳಗೆ 64,275 ಮಂದಿ ತಮ್ಮ ಬಳಿ ಇರುವ ಅಕ್ರಮ ಸಂಪತ್ತನ್ನು ಬಹಿರಂಗ ಪಡಿಸಿದ್ದು, ಈ ಮೂಲಕ 65,250 ಕೋಟಿ ರೂ.ಕಪ್ಪು ಹಣ ಘೋಷಣೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ...

ಜಿಎಸ್​ಟಿ ಮಸೂದೆ ಕುರಿತು ಕೇಂದ್ರ ಸಚಿವರಿಂದ ಕಾಂಗ್ರೆಸ್ ನಾಯಕರ ಭೇಟಿ

ಸರಕು ಮತ್ತು ಸೇವಾತೆರಿಗೆ (ಜಿಎಸ್​ಟಿ) ಮಸೂದೆಯನ್ನು ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸುವ ಸಂಬಂಧ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ಅನಂತ್ ​ಕುಮಾರ್ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಅಜಾದ್, ಆನಂದ್ ಶರ್ಮಾ ಜತೆಗೆ ಮಾತುಕತೆ ನಡೆಸಿದ್ದಾರೆ. ಭೇಟಿ ಬಳಿಕ ಮಾತನಾಡಿದ ಅರುಣ್ ಜೇಟ್ಲಿ,...

ಸುಬ್ರಮಣಿಯನ್ ಸ್ವಾಮಿ ಎರಡು ಕಾರ್ಯಕ್ರಮ ರದ್ದುಗೊಳಿಸಿದ ಬಿಜೆಪಿ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿರುವುದಕ್ಕೆ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ವಿರುದ್ಧ ಬಿಜೆಪಿ ವರಿಷ್ಠರು ಅಸಮಾಧಾನಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಸ್ವಾಮಿ ಭಾಗವಹಿಸಬೇಕಿದ್ದ ಎರಡು ಕಾರ್ಯಕ್ರಮಗಳನ್ನು...

ಸ್ಟಾರ್ಟ್ ಅಪ್​ ನಿಧಿಗೆ 10,000 ಕೋಟಿ ರೂ ನೀಡಲು ಕೇಂದ್ರ ಒಪ್ಪಿಗೆ

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸ್ಟಾರ್ಟ್ ಅಪ್​ ನಿಧಿ ಯೋಜನೆಗೆ 10,000 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ. ಸಂಪುಟ ಸಭೆಯ ಬಳಿಕ ವಿತ್ತ ಸಚಿವ...

ತೆರಿಗೆ ಕಳ್ಳರ ಪತ್ತೆಗೆ ಭಾರತ-ಅಮೆರಿಕಾ ಸಹಯೋಗ

ಕಡಲಾಚೆಗಿನ ತೆರಿಗೆ ವಂಚಕರ ಪತ್ತೆಗೆ ಮತ್ತು ತೆರಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಅಮೆರಿಕಾ ಮತ್ತು ಭಾರತ ಪರಸ್ಪರ ಸಮ್ಮತಿ ಸೂಚಿಸಿವೆ. ಅಮೆರಿಕಾದಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ಅಮೆರಿಕಾದ ಖಜಾನೆ ಕಾರ್ಯದರ್ಶಿ ಜಾಕೋಬ್‌ ಲೇವ್‌ ಅವರ ನಡುವೆ ನಡೆದ 6 ನೇ...

ದೇಶದಲ್ಲಿ ಉತ್ತಮ ಮಳೆಯಾದರೆ ಆರ್ಥಿಕ ಪ್ರಗತಿ: ಅರುಣ್ ಜೇಟ್ಲಿ

ಹವಾಮಾನ ಇಲಾಖೆ ಇತ್ತೀಚೆಗೆ ನೀಡಿರುವ ವರದಿಯಂತೆ ಈ ವರ್ಷ ಭಾರತದಲ್ಲಿ ಉತ್ತಮ ಮಳೆಯಾದರೆ ವೇಗವಾಗಿ ಪ್ರಗತಿ ಹೊಂದಲು ಸಾಧ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಉತ್ತಮ ಮಳೆ ಬಂದರೆ ದೇಶದ ರೈತರು ಚೆನ್ನಾಗಿ ಬೆಳೆ ಬೆಳೆಯಬಹುದು. ಇದರಿಂದ ನಮ್ಮ...

ಪನಾಮಾ ಪೇಪರ್ಸ್ ಬಹಿರಂಗ ಹಗರಣ: ತನಿಖಾ ವರದಿ ಸಲ್ಲಿಸಲು ಪ್ರಧಾನಿ ಮೋದಿ ಆದೇಶ

ಪನಾಮಾ ಪೇವರ್ಸ್ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆದೇಶ ನೀಡಿದ್ದಾರೆ. ಏಪ್ರಿಲ್ 4 ರಂದು ಪನಾಮಾ ಪೇಪರ್ಸ್ ಬಹಿರಂಗ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಸುದ್ದಿ ಮಾಧ್ಯಮವೊಂದರ ಪ್ರಕಾರ ಮೋದಿಯವರು ಬೆಲ್ಜಿಯಂ-ಅಮೆರಿಕ- ಸೌದಿ ಅರೇಬಿಯಾ...

ಪನಾಮಾ ದಾಖಲೆ ಬಹಿರಂಗ: ತೆರಿಗೆ ವಂಚಕರ ವಿರುದ್ಧ ಕ್ರಮ-ಜೇಟ್ಲಿ

ಪನಾಮಾದಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರು ಕಾನೂನು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಲೆಕ್ಕಕ್ಕೆ ಸಿಗದ ಸಂಪತ್ತನ್ನು ಭಾರತಕ್ಕೆ ವಾಪಾಸು ತರುವ ಬಗ್ಗೆ ಕೇಂದ್ರ ಸರ್ಕಾರ ಮುಂದಿನ ವರ್ಷ ಕಾರ್ಯನಿರತವಾಗಲಿದೆ. ಆಗ ತಮ್ಮ ಸಂಪತ್ತನ್ನು ಮುಚ್ಚಿಡಲು ಯಾರಿಗೂ...

ಕೇಂದ್ರ ಬಜೆಟ್ 2016: ಕೃಷಿ ಮತ್ತು ಗ್ರಾಮೀಣ ಪ್ರದೇಶಗಳ ಮೇಲೆ ಹೆಚ್ಚು ಗಮನ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಸೋಮವಾರ ಲೋಕಸಭೆಯಲ್ಲಿ 3ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ್ದು, ಈ ಸಲ ಸಣ್ಣ ತೆರಿಗೆದಾರರಿಗೆ ಕೇಂದ್ರ ರಿಲೀಫ್ ನೀಡಿದೆ. ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಬಾಡಿಗೆ ಮನೆಯಲ್ಲಿರುವ ಉದ್ಯೋಗಿಗಳಿಗೆ 24...

ಆರ್ಥಿಕ ಸಮೀಕ್ಷೆ 2015 - 16: ಕೆಲವು ವರ್ಷಗಳಲ್ಲಿ ಭಾರತವು ಶೇಕಡಾ 8ರ ಬೆಳವಣಿಗೆಯನ್ನು ಸಾಧಿಸಲಿದೆ

ಏಪ್ರಿಲ್ 1ರಿಂದ ಆರಂಭವಾಗಲಿರುವ 2016-17ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಒಟ್ಟು ರಾಷ್ಟ್ರೀಯ ಜಿಡಿಪಿ ಶೇಕಡಾ 7ರಿಂದ 7.5ರಷ್ಟು ಬೆಳವಣಿಗೆಯಾಗಲಿದೆ ಎಂದು ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆಯು ಹೇಳಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ 2016-17ರ...

ಕೇಂದ್ರ ಬಜೆಟ್ ಅಧಿವೇಶನ ಫೆ. 23 ರಿಂದ

2016-17ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನ ಫೆಬ್ರುವರಿ 23ರಿಂದ ಆರಂಭವಾಗಲಿದ್ದು, ಫೆ. 29 ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಅಧಿವೇಶನ ಒಂದು ತಿಂಗಳ ಮೇಲೆ ಬಿಡುವಿನ ಜೊತೆ ಎರಡು ಭಾಗಗಳಲ್ಲಿ ನಡೆಯಲಿದ್ದು, ಮೇ...

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಅರುಣ್ ಜೇಟ್ಲಿ ಮಾನನಷ್ಟ ಮೊಕದ್ದಮೆ ದಾಖಲು

ದೆಹಲಿ ಪಟಿಯಾಲ ನ್ಯಾಯಾಲಯದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಕೆಲವು ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ಸೋಮವಾರ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಮತ್ತು ಇತರ ಕೆಲವು ಆಪ್...

ಕೇಜ್ರಿವಾಲ್ ಸುಳ್ಳು ಪ್ರಚಾರ ಮಾಡುತ್ತಿದ್ದಾರೆಃ ಅರುಣ್ ಜೇಟ್ಲಿ ತಿರುಗೇಟು

ಡಿಡಿಸಿಎ ವಿವಾದದ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಜ್ರಿವಾಲ್ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಗುರುವಾರ ಆರೋಪ ಮಾಡಿ, ಅವರು ಅಸತ್ಯವನ್ನು ನಂಬಿ, ಉನ್ಮಾದದ ಅಂಚಿನಲ್ಲಿರುವ ಮಾತನಾಡುತ್ತಾರೆ ಎಂದರು. ಕೇಜ್ರಿವಾಲ್ ಗೆ ಬೆಂಬಲ...

ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆಃ ಪ್ರಧಾನಿ ನರೇಂದ್ರ ಮೋದಿ

ಕಳೆದ ವರ್ಷ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದರು. ಆರ್ಥಿಕ ಪರಿವರ್ತನೆಯ ಕೆಲಸ ಮ್ಯಾರಥಾನ್ ನ ಹಾಗೆ ಎಂದು ವಿವರಿಸಿದರು. ಎಲ್ಲಾ ಆರ್ಥಿಕ ಸೂಚಕಗಳ...

ವೇಗವಾಗಿ ಅಭಿವೃದ್ಧಿ ಹೊಂದಲು ಆಫ್ರಿಕಾದ ಮೇಲೆ ಭಾರತದ ಕಣ್ಣುಃ ಅರುಣ್ ಜೇಟ್ಲಿ

ಭಾರತ ಆರ್ಥಿಕವಾಗಿ ಅತೀ ವೇಗವಾಗಿ ಬೆಳೆಯಲು ಬಯಸುತ್ತದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಗಳವಾರ ಹೇಳಿದ್ದಾರೆ. ಆಫ್ರಿಕಾದಲ್ಲಿ ವ್ಯಾಪಾರ ಮತ್ತು ಆರ್ಥಿಕ ಸಹಕಾರದ ಹೊಸ ಅವಕಾಶಗಳ ಮೇಲೆ ಭಾರತ ಕಣ್ಣಿಟ್ಟಿದೆ. ಭಾರತ ಇಂದು ಅತೀ ವೇಗವಾಗಿ ಅಭಿವೃದ್ಧಿ ಹೊಂದಲು ಬಯಸುತ್ತದೆ. ನಾವು...

ಅಕ್ರಮವಾಗಿ ದಾಸ್ತಾನು ಮಾಡಲಾದ 36000 ಟನ್‌ ಬೇಳೆಕಾಳು ವಶ

ತೊಗರಿ, ಉದ್ದಿನಂಥ ಬೇಳೆಕಾಳುಗಳು 200 ರೂ. ಗಡಿ ದಾಟಿ ಬೆಲೆ ಗಗನಕ್ಕೇರಿರುವಂತೆಯೇ, ಅಕ್ರಮ ದಾಸ್ತಾನುಗಾರರ ಮೇಲೆ ಸರ್ಕಾರಗಳು ತೀವ್ರ ದಾಳಿ ನಡೆಸಿವೆ. 10 ರಾಜ್ಯಗಳಲ್ಲಿ 36 ಸಾವಿರ ಟನ್‌ ಬೇಳೆಕಾಳು ಅಕ್ರಮ ದಾಸ್ತಾನನ್ನು ವಶಪಡಿಸಿಕೊಂಡಿವೆ. ಅಲ್ಲದೆ, ವಿದೇಶಗಳಿಂದ 5 ಸಾವಿರ ಟನ್‌...

ಜಿ ಎಸ್ ಟಿ ಯನ್ನು ಏಪ್ರಿಲ್ 1, 2016 ರಿಂದ ಜಾರಿಗೊಳಿಸಬಯಸುತ್ತೇನೆಃ ಅರುಣ್ ಜೇಟ್ಲಿ

ಹೊಸ ಸರಕು ಮತ್ತು ಸೇವಾ ತೆರಿಗೆ ನೀತಿಗೆ ಶಾಸಕಾಂಗದಲ್ಲಿ ಅನುಮೋದನೆ ಕಾಂಗ್ರೆಸ್ ಅಡ್ಡಿಪಡಿಸಿದರೂ ಸಹ ಎಪ್ರಿಲ್ 1, 2016 ರಿಂದ ಜಾರಿಗೊಳಿಸಬಯಸುತ್ತೇನೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ. ಬಿಸಿನೆಸ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ,...

ಗೋಲ್ಡ್ ಬಾಂಡ್ ಮತ್ತು ಚಿನ್ನ ನಗದೀಕರಣ ಯೋಜನೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ

ಭೌತಿಕ ರೂಪದಲ್ಲಿ ಲೋಹದ ಬೇಡಿಕೆಯನ್ನು ಕಡಿಮೆ ಮಾಡಲು ಮತ್ತು ಮನೆಗಳಲ್ಲಿ ಮತ್ತು ಇತರೆಡೆ ಬಳಕೆ ಮಾಡದ ಚಿನ್ನವನ್ನು ಸದ್ಬಳಕೆ ಮಾಡಲು ಬುಧವಾರ ನಡೆದ ಸಂಪುಟ ಸಭೆಯಲ್ಲಿ ಗೋಲ್ಡ್ ಬಾಂಡ್ ಮತ್ತು ಚಿನ್ನ ನಗದೀಕರಣ (Gold Monetisation) ಯೋಜನೆಗಳಿಗೆ ಒಪ್ಪಿಗೆ ದೊರೆತಿದೆ. ಈ ಎರಡೂ...

ಶೈಕ್ಷಣಿಕ ಸಾಲ ಪಡೆಯಲು ಕೇಂದ್ರ ಸರ್ಕಾರದಿಂದ ಸುಲಭ ವಿಧಾನ ಜಾರಿ

ಶೈಕ್ಷಣಿಕ ಸಾಲ ಪಡೆಯಲು ವಿದ್ಯಾರ್ಥಿಗಳಿಗಾಗಿ vidyalakshmi.co.in (ವಿದ್ಯಾಲಕ್ಷ್ಮಿ.ಕೋ.ಇನ್) ಎನ್ನುವ ಜಾಲತಾಣ ಪ್ರಾರಂಭಿಸಿರುವುದಾಗಿ ಗುರುವಾರ ಕೇಂದ್ರ ಸರ್ಕಾರ ತಿಳಿಸಿದೆ. ಎಸ್ ಬಿ ಐ, ಐಡಿಬಿಐ, ಬ್ಯಾಂಕ್ ಆಫ್ ಇಂಡಿಯಾ ಸೇರಿ ಐದು ಬ್ಯಾಂಕ್ ಗಳು ತಮ್ಮ ವ್ಯವಸ್ಥೆಯನ್ನು ಈ ಪೊರ್ಟಲ್ ಜೊತೆ...

ಸರಕು ಮತ್ತು ಸೇವಾ ತೆರಿಗೆ ಮಸೂದೆ ಅನುಮೋದನೆಗೆ 2 ದಿನದ ವಿಶೇಷ ಅಧಿವೇಶನದ ಸಾಧ್ಯತೆ

ಕಾಂಗ್ರೆಸ್ ಪ್ರತಿಭಟನೆಯಿಂದ ಮುಂಗಾರು ಅಧಿವೇಶನದಲ್ಲಿ ಯಾವುದೇ ಮಸೂದೆಯನ್ನು ಮಂಡಿಸಲೂ ಸಾಧ್ಯವಾಗದ ಹಿನ್ನಲೆಯಲ್ಲಿ, ಬಿಹಾರ ವಿಧಾನಸಭಾ ಚುನಾವಣೆಗೂ ಮೊದಲು ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿ ಎಸ್ ಟಿ) ಅನುಮೋದನೆ ಪಡೆಯಲು ಸೆಪ್ಟಂಬರ್ ನಲ್ಲಿ ಕೇಂದ್ರ ಸರ್ಕಾರ ಎರಡು ದಿನಗಳ ಸಂಸತ್...

ಗಾಂಧಿ ಕುಟುಂಬದ ಹೊರಗಿನವರು ದೇಶ ನಡೆಸುವುದು ಸೋನಿಯಾ-ರಾಹುಲ್ ಗೆ ಸಹ್ಯವಾಗುತ್ತಿಲ್ಲ-ಜೇಟ್ಲಿ

2014ರ ಚುನಾವಣಾ ಸೋಲನ್ನು ಅರಗಿಸಿಕೊಳ್ಳಲು ಗಾಂಧಿ ಪರಿವಾರಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ದೇಶದ ಪ್ರಗತಿಗೆ ಅವರು ತಡೆಯೊಡ್ಡುತ್ತಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸೋನಿಯಾ-ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆ ರಾಜ್ಯಸಭೆಯಲ್ಲಿ ಮಹತ್ವದ ಜಿ.ಎಸ್.ಟಿ...

ಮುಂಗಾರು ಅಧಿವೇಶನ ಪ್ರಾರಂಭಃ ರಾಜ್ಯಸಭೆಯಲ್ಲಿ ಲಲಿತ್ ಗೇಟ್ ವಿಷಯ ಪ್ರಸ್ತಾಪ

ಮಂಗಳವಾರದಿಂದ ಪ್ರಾರಂಭವಾದ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಲಲಿತ್ ಗೇಟ್ ವಿಷಯವನ್ನು ಪ್ರಸ್ತಾಪಿಸಿದೆ. ಲಲಿತ್ ಗೇಟ್ ಪ್ರಕರಣದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರವು ನೀಡಿರುವ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ಆನಂದ್ ಶರ್ಮಾ, ಸುಷ್ಮಾ ಸ್ವರಾಜ್ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದ...

ಒಮ್ಮತದೊಂದಿಗೆ ಕಾರ್ಮಿಕ ಸುಧಾರಣೆಗಳನ್ನು ಜಾರಿಗೆ ತರುತ್ತೇವೆ: ಪ್ರಧಾನಿ ನರೇಂದ್ರ ಮೋದಿ

ಕಾರ್ಮಿಕ ಸಂಘಟನೆಗಳ ಒಮ್ಮತದೊಂದಿಗೆ ಕಾರ್ಮಿಕ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸೋಮವಾರ ನಡೆದ 46 ನೇ ಭಾರತೀಯ ಕಾರ್ಮಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾರ್ಮಿಕ ಸಂಘಟನೆಗಳ ಒಮ್ಮತ ಪಡೆದು ಕಾರ್ಮಿಕ ಕಾನೂನುಗಳನ್ನು ಸರಿಪಡಿಸಲು ಪ್ರಯತ್ನ ಮಾಡಲಾಗುವುದೆಂದು...

ರಾಜಕಾರಣದಲ್ಲಿ ಅಸ್ಪೃಶ್ಯತೆ ಇರಲೇಬಾರದು, ದೇಶಕ್ಕಾಗಿ ದುಡಿದವರನ್ನು ಗೌರವಿಸಬೇಕುಃ ಮೋದಿ

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಹಿರಿಯ ನಾಯಕ ದಿವಂಗತ ಗಿರಿಧಾರಿ ಲಾಲ್ ಡೋಗ್ರಾ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಜಮ್ಮುವಿಗೆ ಆಗಮಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಡೋಗ್ರಾ ಅವರ ಜೀವನದ ಫೋಟೋ ಪ್ರದರ್ಶನ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಮಾತನಾಡುತ್ತ ಪ್ರಧಾನಿ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ಹರ್ ಖೇತ್ ಕೊ ಪಾನಿ ಎಂಬ ಗುರಿಯ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮುಂದಿನ 5 ವರ್ಷಗಳಲ್ಲಿ ಯೋಜನೆಗೆ 50...

ಕಾರ್ಪೋರೇಟ್ ತೆರಿಗೆ ವಿನಾಯ್ತಿ ರದ್ದು ಮಾರ್ಗಸೂಚಿ 45 ದಿನಗಳಲ್ಲಿ

ಮುಂದಿನ 45 ದಿನಗಳಲ್ಲಿ ಕಾರ್ಪೋರೇಟ್ ಗಳಿಗೆ ನೀಡುತ್ತಿರುವ ತೆರಿಗೆ ವಿನಾಯ್ತಿಗಳನ್ನು ರದ್ದು ಪಡಿಸುವ ಮಾರ್ಗಸೂಚಿಯನ್ನು ಬಹಿರಂಗ ಪಡಿಸಲಾಗುವುದೆಂದು ಕೇಂದ್ರ ಕಂದಾಯ ಕಾರ್ಯದರ್ಶಿ ಶಕ್ತಿಕಂಟದಾಸ್ ಬುಧವಾರ ತಿಳಿಸಿದ್ದಾರೆ. 4 ವರ್ಷಗಳಲ್ಲಿ ತೆರಿಗೆಯನ್ನು ಶೇಕಡಾ 25 ಕ್ಕೆ ಇಳಿಸುವ ಯೋಜನೆಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ...

ಡಿಜಿಟಲ್ ಇಂಡಿಯಾದ ಮೂಲಕ ಇಡೀ ಭಾರತವನ್ನು ಒಗ್ಗೂಡಿಸುವುದು ನನ್ನ ಕನಸುಃಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಜುಲೈ 1 ರಂದು ಚಾಲನೆ ನೀಡಿದರು. 2.5 ಲಕ್ಷ ಹಳ್ಳಿಗಳಲ್ಲಿ ಬ್ರೋಡ್ ಬ್ಯಾಂಡ್ ಸೇವೆ ಕಲ್ಪಿಸುವ ಯೋಜನೆಯನ್ನು ಕೈಗಾರಿಕೋದ್ಯಮಿಗಳಾದ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಭಾರತೀ ಗ್ರೂಪ್...

ದೆಹಲಿ ಕ್ರಿಕೆಟ್ ಸಂಸ್ಥೆ ಹಗರಣದಲ್ಲಿ ಜೇಟ್ಲಿ ಭಾಗಿ: ಲಲಿತ್ ಮೋದಿ ಆರೋಪ

ದೆಹಲಿ ಕ್ರಿಕೆಟ್‌ ಸಂಸ್ಥೆಯ ಹಗರಣದಲ್ಲಿ ಅರುಣ್ ಜೇಟ್ಲಿ ಭಾಗಿಯಾಗಿದ್ದು, ಅವರು ತಮ್ಮ ದೂರವಾಣಿ ಕರೆ ವಿವರ ಬಹಿರಂಗಪಡಿಸಲಿ ಎಂದು ಮಾಜಿ ಐಪಿಎಲ್‌ ಮುಖ್ಯಸ್ಥ ಲಲಿತ್‌ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು...

ಜೇಟ್ಲಿ ವಿರುದ್ಧ ಬಿಜೆಪಿ ಮುಖಂಡ ಕೀರ್ತಿ ಆಜಾದ್ ವಾಗ್ದಾಳಿ

ಲಲಿತ್ ಮೋದಿ- ಸುಷ್ಮಾ ಸ್ವರಾಜ್ ಹಗರಣ ಸಂಬಂಧ `ಹಿತಶತ್ರು' ಎಂಬ ಪದ ಬಳಸಿ ಬಿಜೆಪಿಗೆ ಮುಜುಗರ ಉಂಟುಮಾಡಿದ್ದ ಪಕ್ಷದ ಮುಖಂಡ ಕೀರ್ತಿ ಆಜಾದ್ ಈಗ ಬಹಿರಂಗವಾಗಿಯೇ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಲಿತ್ ವಿವಾದ ಭುಗಿಲೆದ್ದ ಬೆನ್ನಲ್ಲೇ ವಿದೇಶಾಂಗ...

ಪ್ಲಾಸ್ಟಿಕ್ ನೋಟು ಜಾರಿಗೆ ಕೇಂದ್ರ ಸರ್ಕಾರ ಚಿಂತನೆ: ಜೇಟ್ಲಿ

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಭಾರತ ಮುಂಚೂಣಿಯಲ್ಲಿದ್ದು, ಅಭಿವೃದ್ಧಿ ಹೊಂದಿರುವ ದೇಶಗಳಂತೆ ಭಾರತದಲ್ಲೂ ಪ್ಲಾಸ್ಟಿಕ್ ನೋಟುಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಮೇಕ್ ಇನ್ ಇಂಡಿಯಾದ ಬಗ್ಗೆ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ...

ಪ್ರದೀಪ್ ಬೈಜಾಲ್ ಯುಪಿಎ ಸರ್ಕಾರದ ಕಿರುಕುಳಕ್ಕೆ ಒಳಗಾಗಿದ್ದರು: ಜೇಟ್ಲಿ

ಯುಪಿಎ ಸರ್ಕಾರದ ಅವಧಿಯಲ್ಲಿ ಟ್ರಾಯ್ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಾಲ್ ಅವರು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ವಿರುದ್ಧ ಪ್ರದೀಪ್ ಬೈಜಾಲ್...

ಬಿಹಾರ ಚುನಾವಣೆಯಲ್ಲಿ ಬಿಜೆಪಿಗೆ ನಿರ್ಣಾಯಕ ಗೆಲವು: ಜೇಟ್ಲಿ ವಿಶ್ವಾಸ

ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಕೇಂದ್ರ ಬಿಂದುವಾಗಿ ಉದಯಿಸಿದೆ. ಮುಂದಿನ ಬೆಳವಣಿಗೆಗಳೇನಿದ್ದರೂ ಬಿಜೆಪಿ ಪರ ಮತ್ತು ಬಿಜೆಪಿ ವಿರೋಧಿ ಎಂಬ ನೆಲೆಯಲ್ಲಿರುತ್ತದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಎನ್‍ಡಿಎ ಸರ್ಕಾರದ ಒಂದು ವರ್ಷದ ಸಾಧನೆಗಳ ಬಗ್ಗೆ ಮಾಧ್ಯಮಗಳೊಂದಿಗೆ...

ಮೋದಿ ಸರಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದೆ: ಸಚಿವ ಅರುಣ್ ಜೇಟ್ಲಿ

ಕೇಂದ್ರದಲ್ಲಿ ಮೋದಿ ಸರಕಾರ ಮೇ 26ಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸರಕಾರದ ಸಾಧನೆಗಳನ್ನು ಮತ್ತು ನೀತಿಗಳನ್ನು ಸಮರ್ಥಿಸಿಕೊಂಡಿದ್ದಾರೆ. ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೇಟ್ಲಿ, ಹೊಸ ದೃಷ್ಟಿಕೋನದಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ನಾವು ಭ್ರಷ್ಟಾಚಾರ ಮುಕ್ತ...

ತೆರಿಗೆ ಹೊರೆ ಇಳಿಕೆ: ಉದ್ಯಮಸ್ನೇಹಿ ಭಾರತ ನಿರ್ಮಾಣ- ಅರುಣ್ ಜೇಟ್ಲಿ

ಎನ್.ಡಿ.ಎ ನೇತೃತ್ವದ ಕೇಂದ್ರ ಸರ್ಕಾರ ಒಂದು ವರ್ಷದ ಅಧಿಕಾರಾವಧಿ ಪೂರೈಸಿದೆ. ಈ ನಿಟ್ಟಿನಲ್ಲಿ ತೆರಿಗೆ ಹೊರೆಯನ್ನು ಮತ್ತಷ್ಟು ಇಳಿಸಿ, ಭಾರತದಲ್ಲಿ ಇನ್ನಷ್ಟು ಉದ್ಯಮಗಳಿಗೆ ಅವಕಾಶ ನೀಡುವ ಮೂಲಕ ಉದ್ಯಮಸ್ನೇಹಿ ಭಾರತವನ್ನಾಗಿ ಮಾಡುವ ಪ್ರಮುಖ ಗುರಿ ಹೊಂದಲಾಗಿದೆ ಎಂದು ಕೇಂದ್ರ ವಿತ್ತ ಸಚಿವ...

ಕೆನಡಾದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಮೋದಿ ಕ್ಷಮೆಯಾಚನೆಗೆ ಕಾಂಗ್ರೆಸ್ ಒತ್ತಾಯ

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಕೈಗೊಂಡಿದ್ದ ಕೆನಡಾ ಪ್ರವಾಸದಲ್ಲಿ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಟೋರಂಟೋದಲ್ಲಿ ಭಾಷಣ ಮಾಡುವಾಗ ಯುಪಿಎ ಸರ್ಕಾರ ಮಾಡಿರುವ ಕೊಳೆಯನ್ನು ನಾವು ತೊಳೆಯಲಿದ್ದೇವೆ...

ಕಪ್ಪುಹಣ ವಿಚಾರ: ಪ್ರಗತಿ ವರದಿ ಸಲ್ಲಿಕೆಗೆ ಸುಪ್ರೀಂ ಕೋರ್ಟ್ ಆದೇಶ

ವಿದೇಶಿ ಬ್ಯಾಂಕುಗಳಲ್ಲಿ ತೆರಿಗೆ ವಂಚನೆಯ ಹಣವನ್ನು ಠೇವಣಿ ಇರಿಸಿರುವ ಕಪ್ಪುಹಣ ಪ್ರಕರಣಗಳ ತನಿಖೆಯ ಪ್ರಗತಿ ವರದಿಯನ್ನು ಮೇ 12ರಂದು ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಮುಖ್ಯನ್ಯಾಯಮೂರ್ತಿ ಹೆಚ್‌.ಎಲ್.ದತ್ತು, ನ್ಯಾಯಮೂರ್ತಿ ಮದನ್ ಬಿ ಲೋಕುರ್, ಎಕೆ ಸಿಕ್ರಿ ಅವರನ್ನೊಳಗೊಂಡ ನ್ಯಾಯಪೀಠ,...

ಸಣ್ಣ, ಅತಿ ಸಣ್ಣ ಉದ್ಯಮಗಳಿಗೆ ಮೀಸಲಾದ ಮುದ್ರಾ ಬ್ಯಾಂಕ್ ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಸಣ್ಣ, ಅತಿ ಸಣ್ಣ ಉದ್ಯಮಗಳಿಗೆ 10 ಲಕ್ಷ ರೂಗಳ ವರೆಗೆ ಸಾಲ ನೀಡಲೆಂದೇ ಸ್ಥಾಪಿತವಾಗಿರುವ ಮುದ್ರಾ ಬ್ಯಾಂಕ್ ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಕವಾಗಿ ಕಾರ್ಯನಿರ್ವಹಿಸಲಿರುವ ಮುದ್ರಾ ಬ್ಯಾಂಕ್, ರೂ. 20 ಸಾವಿರ ಕೋಟಿ...

ಕಪ್ಪು ಹಣ ವಾಪಸ್ ತರಲು ನೂತನ ಕಾಯ್ದೆ : ಅರುಣ್ ಜೇಟ್ಲಿ

ವಿದೇಶಿ ಬ್ಯಾಂಕ್‌ ಗಳಲ್ಲಿ ಕಪ್ಪು ಹಣ ಹೊಂದಿರುವ ವ್ಯಕ್ತಿಗಳು ತೆರಿಗೆ ಪಾವತಿಸಲು ಅನುಕೂಲವಾಗುವಂತೆ ನೂತನ ಕಪ್ಪು ಹಣ ಕಾಯ್ದೆಯಡಿ ಸರ್ವರಿಗೂ ಅನುಸರಣಾ ಯೋಗ್ಯವಾದ ಸಮಗ್ರ ಗವಾಕ್ಷಿ ಪದ್ಧತಿ ಜಾರಿಗೆ ತರಲಾಗುವುದು ಎಂದು ವಿತ್ತ ಸಚಿವ ಅರುಣ್ ಜೈಟ್ಲಿ ಹೇಳಿದ್ದಾರೆ. ನವದೆಹಲಿಯಲ್ಲಿ ಆಯೋಜಿಸಿದ್ದ...

ರಾಜಕೀಯ ಅಪಕ್ವತೆಗೆ ಆಪ್ ಬಲಿಯಾಗಬಾರದು: ಅರುಣ್ ಜೇಟ್ಲಿ

ಆಮ್ ಆದ್ಮಿ ಪಕ್ಷದ ಸರ್ಕಾರ 'ರಾಜಕೀಯ ಅಪಕ್ವತೆ'ಗೆ ಬಲಿಯಾಗಿ ದೆಹಲಿ ಜನರ ಸೇವೆಗೆ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಕೇಂದ್ರ ವಿತ್ತ ಮಂತ್ರಿ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಜನರು ಬಹಳಷ್ಟು ನಿರೀಕ್ಷೆಯಿಂದ ಈ ಸರ್ಕಾರಕ್ಕೆ ಮತ ಹಾಕಿದರು. ಅವರು ತಮ್ಮ ಚುನಾಣಾ ವಚನಗಳನ್ನು...

ವಿದೇಶಗಳಲ್ಲಿ ಕಪ್ಪು ಹಣ ಬಚ್ಚಿಟ್ಟವರಿಗೆ ಜೈಲು ಶಿಕ್ಷೆ

ವಿದೇಶಗಳಲ್ಲಿ ಕಪ್ಪು ಹಣವನ್ನು ಬಚ್ಚಿಡುವವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸುವ ಕಪ್ಪು ಹಣ ನಿಯಂತ್ರಣ ಕುರಿತ ವಿಧೇಯಕವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಮಂಡಿಸಿದರು. ಬಜೆಟ್‌ನಲ್ಲಿ ನೀಡಿದ್ದ ಆಶ್ವಾಸನೆಯಂತೆ ಲೋಕಸಭೆಯಲ್ಲಿ ಜೇಟ್ಲಿ, 88 ನಿಯಮ...

ರಾಹುಲ್ ವಿರುದ್ಧ ಗೂಢಚರ್ಯೆ ನಡೆಸಿಲ್ಲ: ಭದ್ರತಾ ದೃಷ್ಟಿಯಿಂದ ವಿಚಾರಣೆ ಅಷ್ಟೆ- ಜೇಟ್ಲಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಗೂಢಚರ್ಯೆ ನಡೆಸಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ರಾಹುಲ್ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸುವುದರಲ್ಲಿ ತಪ್ಪಿಲ್ಲ. ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ರಾಜಕಾರಣದಿಂದ ಕೊಂಚ ನಿರಾಳತೆ ಪಡೆಯುವ...

ಲಂಡನ್ ಪಾರ್ಲಿಮೆಂಟ್‌ ಸ್ಕೈರ್ ನಲ್ಲಿ ಗಾಂಧಿ ಪುತ್ಥಳಿ ಅನಾವರಣ

ಬ್ರಿಟನ್‌ ಸಂಸತ್‌ ಚೌಕದಲ್ಲಿ ನಿರ್ಮಾಣಗೊಂಡಿರುವ ಮಹಾತ್ಮ ಗಾಂಧಿ ಅವರ ಕಂಚಿತ ಪುತ್ಥಳಿಯನ್ನು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಮಾರ್ಚ್‌ 14ರಂದು ಅನಾವರಣಗೊಳಿಸಿದರು. ಲಂಡನ್ನಿನ ಪಾರ್ಲಿಮೆಂಟ್‌ ಸ್ಕೈರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಲಾಯಿತು.ಒಂದು ಮಿಲಿಯನ್ಸ್ ಪೌಂಡ್ಸ್ ದೇಣಿಗೆಯಲ್ಲಿ ನಿರ್ಮಾಣ ವಾದ...

2015-16ನೇ ಸಾಲಿನ ಕೇಂದ್ರ ಬಜೆಟ್

ಕೇಂದ್ರ ಎನ್.ಡಿ.ಎ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಮಂಡಿಸಿದರು. ದೇಶದ ಬಡತನ ನಿರ್ಮೂಲನೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ದೇಶದ ಆರ್ಥಿಕ ವಾತಾವರಣಕ್ಕೆ ಅನುಕೂಲಕರವಾದ ಬಜೆಟ್ ಇದಾಗಿದೆ. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 9...

ಅರುಣ್ ಜೇಟ್ಲಿ ಬಜೆಟ್‌ ಮಂಡನೆಗೆ ಕ್ಷಣಗಣನೆ

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌.ಡಿ.ಎ ಸರ್ಕಾರ, ತನ್ನ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮೊದಲ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆಗೆ ಸಜ್ಜಾಗಿದೆ. ಇಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಎನ್‌.ಡಿ.ಎ ಸರ್ಕಾರದ ಚೊಚ್ಚಲ ಬಜೆಟ್‌ ಮಂಡಿಸಲಿದ್ದು, ಇದರಲ್ಲಿ ಜನಸಾಮಾನ್ಯರ...

ಬಜೆಟ್ ಮಂಡನೆ ಹಿನ್ನೆಲೆ: ನಿಫ್ಟಿ, ಸೆನ್ಸೆಕ್ಸ್ ಸೂಚ್ಯಂಕ ಏರಿಕೆ

'ಎನ್.ಡಿ.ಎ' ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲೂ ನಿರೀಕ್ಷೆಗಳು ಗರಿಗೆದರಿದ್ದು, ಸೆನ್ಸೆಕ್ಸ್ ಹಾಗೂ ನಿಫ್ಟಿ ಅಂಶಗಳು ಏರಿಕೆ ಕಂಡಿವೆ. ಫೆ.28ರ ಬೆಳಿಗ್ಗೆ ಆರಂಭವಾದ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕ 250 ಅಂಶಗಳಷ್ಟು ಏರಿಕೆಯಾದರೆ, ನಿಫ್ಟಿ ಸೂಚ್ಯಂಕ 70 ಅಂಶಗಳಷ್ಟು ಏರಿಕೆಯಾಗಿದೆ. ಅರುಣ್...

ಬಜೆಟ್ ಗೆ ಪ್ರಧಾನಿ ಮೋದಿ ಮೆಚ್ಚುಗೆ

ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಸ್ಪಷ್ಟ ದೃಷ್ಟಿಕೋನ, ಪ್ರಗತಿಪರ, ಸಕಾರಾತ್ಮಕ ಮತ್ತು ಅಭಿವೃದ್ಧಿಶೀಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಜೆಟ್ ಮಂಡನೆಯ ನಂತರ ಪ್ರತಿಕ್ರಿಯೆ ನೀಡಿರುವ ಅವರು, ಯುವಕರು, ರೈತರು, ಬಡವರು, ಮಧ್ಯಮ ವರ್ಗ, ಸಾಮಾನ್ಯ ನಾಗರಿಕರನ್ನು...

ಕೇಂದ್ರ ಬಜೆಟ್: ನಿರುಪಯುಕ್ತ, ಕಾಲ್ಪನಿಕ ಬಜೆಟ್: ಖರ್ಗೆ

ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಲೋಕಸಭೆಯಲ್ಲಿ ಮಂಡಿಸಿದ 2015-16ರ ಬಜೆಟ್ ರೈವೆ ಬಜೆಟ್ ನಂತೆಯೇ ಕಾಲ್ಪನಿಕ ಬಜೆಟ್ ಮುಂಗಡಪತ್ರವಾಗಿದೆ. ಇದರಲ್ಲಿ ಯಾವ ಸಕಾರಾತ್ಮಕ ಅಂಶಗಳೂ ಇಲ್ಲ. ಇದೊಂದು ನಿರುಪಯುಕ್ತ ಬಜೆಟ್ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ...

ಲೋಕಸಭೆಯಲ್ಲಿ ಅರುಣ್ ಜೇಟ್ಲಿಯಿಂದ ಆರ್ಥಿಕ ಸಮೀಕ್ಷೆ ಮಂಡನೆ

'ಹಣಕಾಸು ಬಜೆಟ್' ಗೂ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಪೂರ್ವಭಾವಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. ಸಮೀಕ್ಷೆ ಪ್ರಕಾರ 2015-16ನೇ ಸಾಲಿನಲ್ಲಿ ಶೇ.8ಕ್ಕಿಂತ ಹೆಚ್ಚು ಜಿಡಿಪಿ ಬೆಳವಣಿಗೆಯಾಗಲಿದೆ ಎಂದು ತಿಳಿಸಿದ್ದಾರೆ. ಹಣದುಬ್ಬರ ದರ...

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಮತ್ತೊಮ್ಮೆ ಅಧ್ಯಕ್ಷರಾಗಲು ಶರದ್ ಪವಾರ್ ಯತ್ನ

'ಬಿಸಿಸಿಐ' ಅಧ್ಯಕ್ಷ ಸ್ಥಾನಕ್ಕೆ ಲಾಭಿ ಪ್ರಾರಂಭವಾಗಿದೆ. ಅಧ್ಯಕ್ಷಗಾದಿಯನ್ನು ಮತ್ತೊಮ್ಮೆ ಅಲಂಕರಿಸಲು ಯತ್ನಿಸುತ್ತಿರುವ ಎನ್.ಸಿ.ಪಿ ನಾಯಕ ಶರದ್ ಪವಾರ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಬಿಸಿಸಿಐ ಚುನಾವಣೆ ಬಗ್ಗೆ ಉಭಯ ನಾಯಕರೂ ಚರ್ಚೆ ನಡೆಸಿದ್ದು, ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಬೆಂಬಲಿಸುವ...

ಭೂಸ್ವಾಧೀನ ಕಾಯ್ದೆಯಲ್ಲಿ ಯಾವುದೇ ದೋಷವಿಲ್ಲ: ಅರುಣ್ ಜೇಟ್ಲಿ

ಕೇಂದ್ರ ಭೂಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್ ನ ಉಭಯ ಸದನಗಳು ತೀವ್ರ ಗದ್ದಲಕ್ಕೆ ಸಾಕ್ಷಿಯಾದವು. ಮಸೂದೆ ಕುರಿತು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೋಲಾಹಲವೆಬ್ಬಿಸಿದವು. ರಾಜ್ಯಸಭೆಯಲ್ಲಿ ಸರ್ಕಾರದ ಸುಗ್ರೀವಾಜ್ಞೆಯನ್ನು ಬಲವಾಗಿ ಸಮರ್ಥಿಸಿಕೊಂಡ ಕೇಂದ್ರ ಹಣಕಾಸು ಸಚಿವ ಅರುಣ್...

ಬ್ಯಾಂಕ್ ಮುಷ್ಕರ ಕೈಬಿಡುವಂತೆ ಜೇಟ್ಲಿ ಮನವಿ

ಬ್ಯಾಂಕ್ ನೌಕರರುಗಳ ಒಕ್ಕೂಟಗಳು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಕೈಗೊಂಡಿರುವ ನಿರ್ಧಾರವನ್ನು ಕೈಬಿಡುವಂತೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮನವಿ ಮಾಡಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕ್ ನೌಕರರ ಒಕ್ಕೂಟಗಳು ಫೆ.25ರಿಂದ 28ರ ತನಕ ನಾಲ್ಕು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿವೆ....

ಧರ್ಮದ ಹೆಸರಿನಲ್ಲಿ ಹಿಂಸೆ ಸಹಿಸುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ಎಲ್ಲಾ ಧರ್ಮಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಾಗಿದ್ದು ಪ್ರತಿ ಧರ್ಮಕ್ಕೂ ಸೂಕ್ತ ಪ್ರಾತಿನಿಧ್ಯ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಇಬ್ಬರು ಭಾರತೀಯ ಕ್ರಿಶ್ಚಿಯನ್ನರಿಗೆ ಸಂತಪದವಿ ದೊರೆತಿರುವ ಹಿನ್ನೆಲೆಯಲ್ಲಿ ಕ್ರಿಶ್ಚಿಯನ್ ಸಮುದಾಯ ದೆಹಲಿಯ ವಿಜ್ನಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ...

ಕಪ್ಪು ಹಣ: ಮಾಹಿತಿದಾರನಿಗೆ ಕಮಿಷನ್‌ ನೀಡಲು ಕೇಂದ್ರದ ನಿರ್ಧಾರ

ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ಕುರಿತು ಮಾಹಿತಿ ನೀಡಲು ಮುಂದೆ ಬಂದಿರುವ ವ್ಯಕ್ತಿಗೆ, ಆತ ನೀಡುವ ಮಾಹಿತಿ ಆಧರಿಸಿ ವಶಪಡಿಸಿಕೊಳ್ಳಲಾಗುವ ಕಪ್ಪು ಹಣದಲ್ಲಿ ಶೇ.5ರಷ್ಟು ಕಮೀಷನ್‌ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಪ್ಪು ಕುಳಗಳ ಪಟ್ಟಿಯನ್ನು ಕದ್ದು ಬಿಡುಗಡೆ...

ಕಪ್ಪು ಹಣ: ವಿದೇಶದಲ್ಲಿ ಖಾತೆ ಹೊಂದಿದ್ದ ಭಾರತೀಯರ ಹೆಸರು ಬಹಿರಂಗ

ವಿದೇಶದಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಬೆನ್ನಲ್ಲೇ ಸ್ವಡ್ಜರ್ಲೆಂಡ್ ನಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಜಿನಿವಾದಲ್ಲಿರುವ ಹೆಚ್‌ ಎಸ್‌ ಬಿ ಸಿ ಬ್ಯಾಂಕ್‌ನಲ್ಲಿ ಕಪ್ಪು ಹಣದ ಖಾತೆ ಹೊಂದಿದ್ದ 1, 195 ಭಾರತೀಯರ ಹೆಸರನ್ನು...

ನಾವು ಧರ್ಮ ಸಹಿಷ್ಣುಗಳು: ಅರುಣ್ ಜೇಟ್ಲಿ

ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಇಲ್ಲ. ನಾವು ಧರ್ಮ ಸಹಿಷ್ಣುಗಳು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಇಲ್ಲ. ನಾವು ಧರ್ಮ ಸಹಿಷ್ಣುಗಳು. ಈ ಬಗ್ಗೆ ಉತ್ತಮ ಉದಾಹರಣೆ ಎಂದರೆ, ಒಬಾಮಾ ಎದುರು ದಲೈಲಾಮ...

ದೆಹಲಿ ಮುಸ್ಲಿಮರು ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಬೇಕು: ಶಾಹಿ ಇಮಾಮ್ ಫತ್ವಾ

ನಾಳೆ ನಡೆಯಲಿರುವ ದೆಹಲಿ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮತದಾರರು ಆಮ್ ಆದ್ಮಿ ಪಕ್ಷಕ್ಕೇ ಮತ ಚಲಾಯಿಸಬೇಕೆಂದು ದೆಹಲಿ ಜಮ್ಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹಮದ್ ಬುಖಾರಿ ಫತ್ವಾ ಹೊರಡಿಸಿದ್ದಾರೆ. ದೆಹಲಿಯಲ್ಲಿ ಸೆಕ್ಯುಲರ್ ಸರ್ಕಾರ ರಚನೆಯಾಗಬೇಕಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮತದಾರರು ಆಮ್...

ಜಯಂತಿ ನಟರಾಜನ್ ರಾಜೀನಾಮೆ ಬಗ್ಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯೆ

'ರಾಹುಲ್ ಗಾಂಧಿ' ಬಗ್ಗೆ ಮಾಜಿ ಕೇಂದ್ರ ಸಚಿವೆ ಜಯಂತಿ ನಟರಾಜನ್ ಬರೆದಿರುವ ಪತ್ರ ಯುಪಿಎ ಸರ್ಕಾರ ಕೆಲವು ಕಾಂಗ್ರೆಸ್ ನಾಯಕರ ಹಿತಾಸಕ್ತಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ...

ಶ್ರೀಮಂತರಿಗೆ ಅಡುಗೆ ಅನಿಲ ಸಬ್ಸಿಡಿ ಸ್ಥಗಿತ

ಶ್ರೀಮಂತರಿಗೆ ಸಿಗುವ ಅಡುಗೆ ಅನಿಲ ಸಬ್ಸಿಡಿಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಸರ್ಕಾರದ ಬೊಕ್ಕಸ ಭರ್ತಿಮಾಡಲು ಮುಂದಾಗಿದೆ. ಸಬ್ಸಿಡಿ ಪಡೆಯಲು ಇರುವ ಮಾನದಂಡವನ್ನು ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡುವ ಸಾಧ್ಯತೆ ಇದ್ದು, ಫೆ.28ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ವಿತ್ತ...

ಹೊಸ ತೆರಿಗೆ ವಿನಾಯಿತಿ ಸದ್ಯಕ್ಕಿಲ್ಲ

ಪ್ರಸಕ್ತ ಬಜೆಟ್‍ನಲ್ಲಿ ಹೊಸ ತೆರಿಗೆ ವಿನಾಯ್ತಿ ನೀಡದಿರುವ ಬಗ್ಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸುಳಿವು ನೀಡಿದ್ದಾರೆ. ಫೆಬ್ರವರಿ 28ಕ್ಕೆ ಅರುಣ್ ಜೇಟ್ಲಿ ಮಂಡಿಸಲಿರುವ ಬಜೆಟ್, ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ದಿಕ್ಸೂಚಿ ಬಜೆಟ್ ಆಗಲಿದೆ. ಆದರೆ, ಜನಪ್ರಿಯತೆಗೆ ಒತ್ತು...

ಫೆ.26ಕ್ಕೆ ರೈಲ್ವೆ, 28ಕ್ಕೆ ಕೇಂದ್ರ ಬಜೆಟ್‌ ಮಂಡನೆ

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ 2015-16ರ ತಮ್ಮ ಮೊದಲ ಪೂರ್ಣ ಪ್ರಮಾಣದ ಬಜೆಟ್ ಫೆಬ್ರವರಿ 28 ರಂದು ಮಂಡಿಸಲಿದ್ದಾರೆ. ಫೆ. 23ರಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಫೆ.26ರಂದು ರೈಲ್ವೆ ಮುಂಗಡಪತ್ರ ಮಂಡನೆಯಾಗಲಿದೆ. ಫೆ.27ರಂದು ಆರ್ಥಿಕ ಸಮೀಕ್ಷೆ ಮತ್ತು ಫೆ.28ರಂದು...

ಸಬ್ಸಿಡಿಗಳನ್ನು ಕ್ರಮಬದ್ಧಗೊಳಿಸುವ ಅಗತ್ಯವಿದೆ: ಅರುಣ್ ಜೇಟ್ಲಿ

'ಹೂಡಿಕೆ'ಯನ್ನು ಆಕರ್ಷಿಸಿ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ನೀತಿಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಅಗತ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಜ.19ರಂದು ಚೆನ್ನೈ ನಲ್ಲಿ ನಡೆದ ಸಿಐಐ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅರುಣ್ ಜೇಟ್ಲಿ, ಎಲ್ಲಾ...

ಫೆ.3ನೇ ವಾರದಿಂದ ಕೇಂದ್ರ ಬಜೆಟ್ ಅಧಿವೇಶನ

ಮುಂದಿನ ತಿಂಗಳ 3ನೇ ವಾರದಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಎನ್.ಡಿ.ಎ ಸರ್ಕಾರದ ಎರಡನೇ ಬಜೆಟ್ ಮಂಡನೆಯಾಗಲಿದೆ. ಸರ್ಕಾರ ರಚನೆಯಾದ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಥಮ ಬಜೆಟ್ ಮಂಡಿಸಿದ್ದರು. ಪ್ರಸಕ್ತ ಬಜೆಟ್ ಅಧಿವೇಶನದ ವೇಳೆ ವಿಮಾ...

ಭೂಸ್ವಾಧೀನ ಮಸೂದೆ: ಸುಗ್ರೀವಾಜ್ನೆಗೆ ಅವಸರವೇಕೆ-ರಾಷ್ಟ್ರಪತಿ

ಭೂಸ್ವಾಧೀನ ಮಸೂದೆಯನ್ನು ಸುಗ್ರೀವಾಜ್ನೆ ಮೂಲಕ ಜಾರಿ ಮಾಡಬೇಕೇ? ಹೀಗೆಂದು ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಶಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಂಪುಟ ಅಂಗೀಕರಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಸಹಿ ಹಾಕಿದ್ದರು. ಆದರೆ ಕಡತಕ್ಕೆ ಸಹಿ ಹಾಕುವ ಮುನ್ನ ಮುಖರ್ಜಿಯವರು ಹಣಕಾಸು ಸಚಿವ...

2015-16ನೇ ಸಾಲಿನಲ್ಲಿ ಜಿಡಿಪಿ ಏರಿಕೆಯಾಗುವ ನಿರೀಕ್ಷೆ ಇದೆ: ಅರುಣ್ ಜೇಟ್ಲಿ

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ದೇಶದ ಆರ್ಥಿಕ ಬೆಳವಣಿಗೆ ಚೇತರಿಕೆಯಾಗಲಿರುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ಕಳೆದ 2 ವರ್ಷಗಳಲ್ಲಿ ಆರ್ಥಿಕ ಕುಸಿತ ಉಂಟಾಗಿದ್ದರ ಪರಿಣಾಮ ಆರ್ಥಿಕ ಬೆಳವಣಿಗೆ...

ನೌಕಾ ಪಡೆ ಹೆಲಿಕಾಪ್ಟರನ್ನು ನನ್ನ ಕುಟುಂಬದವರು ಬಳಸಲಿಲ್ಲ: ಜೇಟ್ಲಿ ಸ್ಪಷ್ಟನೆ

ಗೋವಾದಲ್ಲಿ ಆಯೋಜಿಸಿದ್ದ ಮದುವೆ ಕಾರ್ಯಕ್ರಮಕ್ಕೆ ತೆರಳಲು ಜೇಟ್ಲಿ ಕುಟುಂಬದವರು ನೌಕಾ ಪಡೆಯ ಹೆಲಿಕಾಪ್ಟರ್ ನ್ನು ಬಳಿಸಿದ್ದರು ಎಂಬ ಆರೋಪವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಳ್ಳಿಹಾಕಿದ್ದಾರೆ. ಗೋವಾದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲರಾಗಿರುವ ಐರಸ್ ರೋಡ್ರಿಕ್ಸ್, ಈ ಕುರಿತು ಜೇಟ್ಲಿ ವಿರುದ್ಧ...

ಜಮ್ಮು-ಕಾಶ್ಮೀರ ಸರ್ಕಾರ ರಚನೆ: ಬಿಜೆಪಿ ನಾಯಕರನ್ನು ಭೇಟಿ ಮಾಡಿದ ಓಮರ್ ಅಬ್ದುಲ್ಲಾ

'ಜಮ್ಮು-ಕಾಶ್ಮೀರ'ದಲ್ಲಿ ಸರ್ಕಾರ ರಚನೆ ಸಂಬಂಧ ಚರ್ಚೆ ನಡೆಸಲು ಎನ್.ಸಿ ಮುಖಂಡ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ. ಡಿ.25ರಂದು ನವದೆಹಲಿಗೆ ತೆರಳಿರುವ ಓಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ...

ಲೋಕಸಭೆಯಲ್ಲಿ ಮಹತ್ವದ ಜಿಎಸ್ ಟಿ ತೆರಿಗೆ ಮಸೂದೆ ಮಂಡನೆ

'ಕೇಂದ್ರ ಸರ್ಕಾರ'ದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ) ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಡಿ.19ರಂದು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಕೇಂದ್ರ ಸರ್ಕಾರ ಮಂಡಿಸಿರುವ ಜಿ.ಎಸ್.ಟಿ ತಿದ್ದುಪಡಿ ಮಸೂದೆ ರಾಜ್ಯ ಹಾಗೂ ಕೇಂದ್ರಗಳಿಗೆ ಉಪಯುಕ್ತವಾಗಲಿದೆ ಎಂದು ಅರುಣ್ ಜೇಟ್ಲಿ...

ಕಪ್ಪುಹಣವನ್ನು ನೂರು ದಿನದಲ್ಲಿ ವಾಪಸ್ ತರುತ್ತೇವೆ ಎಂದು ಹೇಳಿಲ್ಲ: ಬಿಜೆಪಿ

ಆರು ತಿಂಗಳಾದರೂ ಕಪ್ಪುಹಣ ತರಲು ವಿಫ‌ಲವಾಗಿರುವುದರ ವಿರುದ್ಧ ಪ್ರತಿಪಕ್ಷಗಳು ಟೀಕಾ ಪ್ರಹಾರ ನಡೆಸುತ್ತಿರುವ ಸಂದರ್ಭದಲ್ಲೇ, ಅಧಿಕಾರಕ್ಕೇರಿದ ನೂರು ದಿನದೊಳಗೆ ಕಪ್ಪುಹಣ ತರುವುದಾಗಿ ತಾನೆಂದೂ ಹೇಳಿಯೇ ಇಲ್ಲ ಎಂದು ಕೇಂದ್ರ ಸರ್ಕಾರ ಉಲ್ಟಾ ಹೊಡೆದಿದೆ. ಕಪ್ಪುಹಣ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮಧ್ಯಪ್ರವೇಶಿಸಿದ...

ತೆರಿಗೆ ವಿನಾಯಿತಿ ಮಿತಿ ಹೆಚ್ಚಳದ ಸುಳಿವು ನೀಡಿದ ಜೇಟ್ಲಿ

ಸಂಬಳದಾರರಿಗೆ ಮತ್ತು ಮಧ್ಯಮ ವರ್ಗಕ್ಕೆ ಹೆಚ್ಚಿನ ತೆರಿಗೆ ಹೆಚ್ಚಿಸಿ, ಹೆಚ್ಚಿನ ಹೊರೆಯಾಗಿಸುವುದು ನಮಗೆ ಇಷ್ಟವಿಲ್ಲ, ಬದಲಾಗಿ ತೆರಿಗೆ ವಂಚಿಸುವವರ ಮೇಲೆ ಹೆಚ್ಚಿನ ಹೊರೆಯಾಗುವಂತೆ ಮಾಡಲಿದ್ದೇವೆ. ಇದರಿಂದ ತೆರಿಗೆ ಕಟ್ಟುವವರ ಜೇಬಿನಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡಿ, ಅವರು ಅದನ್ನು ವ್ಯಯಿಸಿದಾಗ ಪರೋಕ್ಷ...

ರಕ್ಷಣಾ ಉಪಕರಣ ಖರೀದಿಯಲ್ಲಿ ಅವ್ಯವಹಾರ ತಡೆಗಟ್ಟಲು ಪರೀಕ್ಕರ್ ಹೊಸ ಪ್ಲಾನ್

'ರಕ್ಷಣಾ ಇಲಾಖೆ' ಉಪಕರಣಗಳನ್ನು ಮಾರಾಟ ಮಾಡುವವರಿಂದ ಭ್ರಷ್ಟಾಚಾರದ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ರಕ್ಷಣಾ ಸಚಿವ ಮನೋಹರ್ ಪರೀಕ್ಕರ್, ಹೊಸ ರಕ್ಷಣಾ ನೀತಿಯನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ. ಎಕೆನಾಮಿಕ್ ಟೈಮ್ಸ್ ನೊಂದಿಗೆ ಮಾತನಾಡಿರುವ ಮನೋಹರ್ ಪರೀಕ್ಕರ್, ರಕ್ಷಣಾ ಉಪಕರಣಗಳ ಮಾರಾಟದಲ್ಲಿ ನಡೆಯುವ "ಲಾಬಿ"ಯನ್ನು ಸರಿಯಾಗಿ ವ್ಯಾಖ್ಯಾನಿಸಬೇಕಿದೆ....

ನ.8ರಂದು ಗೋವಾ ಸಿ.ಎಂ ಸ್ಥಾನಕ್ಕೆ ಮನೋಹರ್ ಪರೀಕ್ಕರ್ ರಾಜೀನಾಮೆ

'ರಕ್ಷಣಾ ಸಚಿವ'ರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ನ.8ರಂದು ,ಗೋವಾ ಮುಖ್ಯಮಂತ್ರಿ ಸ್ಥಾನಕ್ಕೆ ಮನೋಹರ್ ಪರೀಕ್ಕರ್ ರಾಜೀನಾಮೆ ನೀಡಲಿದ್ದಾರೆ. ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಗೋವಾದ 21 ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಮನೋಹರ್ ಪರೀಕ್ಕರ್, ನ.8ರಂದು ಬಿಜೆಪಿ ಸಂಸದೀಯ...

ಮೋದಿ ಸಂಪುಟ ವಿಸ್ತರಣೆ: ರಕ್ಷಣಾ ಖಾತೆಗೆ ಗೋವಾ ಸಿಎಂ ಮನೋಹರ್ ಪಾರಿಕ್ಕರ್ ?

ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ದಟ್ಟವಾಗಿದ್ದು, ರಕ್ಷಣಾ ಖಾತೆಗೆ ಹೊಸ ಸಚಿವರ ನೇಮಕವಾಗಲಿದೆ. ಪ್ರಸ್ತುತ ವಿತ್ತ ಸಚಿವ ಅರುಣ್ ಜೇಟ್ಲಿ ಅವರೇ ರಕ್ಷಣಾ ಖಾತೆಯನ್ನೂ ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದು ಗೋವಾ ಮುಖ್ಯಮಂತ್ರಿ ಮನೋಹರ್...

ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣ ಮಾಡಲು ಸಿದ್ಧ: ಜೇಟ್ಲಿ

ನಷ್ಟದಲ್ಲಿ ನಡೆಯುತ್ತಿರುವ ಕೆಲವು ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಬುಧವಾರ, ನ.೫ರಂದು ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಂಡು ಮಾತನಾಡಿದ ಅರುಣ್ ಜೇಟ್ಲಿ, 'ಕಳೆದ ಕೆಲ...

ಕಪ್ಪುಹಣ: ಸೋನಿಯಾ, ರಾಹುಲ್ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದಕ್ಕೆ ಸ್ವಾಮಿ ಅಸಮಾಧಾನ

'ಕಪ್ಪುಹಣ' ಹೊಂದಿರುವವರ ಪಟ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರಿದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಕಪ್ಪುಹಣದ ಬಗ್ಗೆ ತನಿಖೆ ನಡೆಸುತ್ತಿರುವ ತಂಡಕ್ಕೆ ಪತ್ರ ಬರೆದಿರುವ ಸುಬ್ರಹ್ಮಣಿಯನ್...

ಕಪ್ಪುಹಣ ಹೊಂದಿರುವವರಿಗೆ ಮುಜುಗರ ಉಂಟಾಗುತ್ತದೆಯೇ ಹೊರತು ಪಕ್ಷಕ್ಕೆ ಅಲ್ಲ-ಚಿದಂಬರಂ

'ಕಪ್ಪುಹಣ' ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರ ಹೆಸರಿದ್ದರೆ ಪಕ್ಷಕ್ಕೆ ಮುಜುಗರ ಉಂಟಾಗುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ವೇಳೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಚಿದಂಬರಂ,...

ಕಪ್ಪುಹಣ ಖಾತೆದಾರ ಹೆಸರನ್ನು ತಕ್ಷಣ ಬಹಿರಂಗಪಡಿಸಲಿ: ಕಾಂಗ್ರೆಸ್

ಕಪ್ಪುಹಣ ಇಟ್ಟವರ ಕೆಲವರ ಹೆಸರನ್ನು ಬಹಿರಂಗ ಪಡಿಸಿದರೆ ಕಾಂಗ್ರೆಸ್ ಗೆ ಭಾರೀ ಮುಜುಗರವಾಗಲಿದೆ ಎಂಬ ಸಚಿವ ಅರುಣ್ ಜೇಟ್ಲಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕರು, ಕಪ್ಪುಹಣ ಖಾತೆದಾರರ ಹೆಸರನ್ನು ತಕ್ಷಣ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಜೇಟ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್...

ಕಪ್ಪುಹಣ ಹೊಂದಿರುವವರ ಹೆಸರು ಬಹಿರಂಗಗೊಳಿಸಿದರೆ ಕಾಂಗ್ರೆಸ್ ಗೆ ಮುಜುಗರ: ಜೇಟ್ಲಿ

'ಕಪ್ಪುಹಣ' ಹೊಂದಿರುವವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಎನ್.ಡಿ.ಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕಪ್ಪುಹಣದ ಬಗ್ಗೆ ಮಾತನಾಡಿರುವ ಅರುಣ್ ಜೇಟ್ಲಿ, ಬಿಜೆಪಿ ಸರ್ಕಾರ ಶಾಶ್ವತವಾಗಿ ಕಪ್ಪುಹಣ ಹೊಂದಿರುವವರ ಹೆಸರನ್ನು...

ಎದಿರೇಟು ತಿಂದು ಸುಸ್ತಾದ ಪಾಕಿಸ್ತಾನ: ಪ್ರಧಾನಿ ಶರೀಫರಿಂದ ಶಾಂತಿ ಮಂತ್ರ!

'ಪಾಕ್ ಪುಂಡಾಟಿಕೆ'ಗೆ ಭಾರತದಿಂದ ತೀವ್ರ ಸ್ವರೂಪದ ಪ್ರತಿಕ್ರಿಯೆ ದೊರೆತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ನಡೆಸಿದ್ದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಈಗ ಶಾಂತಿ ಮಂತ್ರ ಜಪಿಸತೊಡಗಿದ್ದಾರೆ! ಭಾರತದ ವಿರುದ್ಧ ಅಪ್ರಚೋದಿತವಾಗಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ದಾಳಿಗೆ ಕಳೆದ ಕೆಲವು ದಿನಗಳಿಂದ...

ಆತ್ಮರಕ್ಷಣೆಗಾಗಿ ಪ್ರತಿದಾಳಿ ಅವಶ್ಯವಾಗಿದೆ: ಅರುಣ್ ಜೇಟ್ಲಿ

ನಮ್ಮ ಭೂ ಭಾಗ ಹಾಗೂ ಜನರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಆತ್ಮರಕ್ಷಣೆಗಾಗಿ ಪಾಕ್ ಸೇನೆ ವಿರುದ್ಧ ಪ್ರತಿದಾಳಿ ನಡೆಸಲೇ ಬೇಕಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ನಿರಂತರವಾಗಿ...

ಪಾಕಿಸ್ತಾನಕ್ಕೆ ಪಾಠ ಕಲಿಸಲು ಸೇನೆ ಸಿದ್ಧವಿದೆ- ಅರುಣ್ ಜೇಟ್ಲಿ

'ಜಮ್ಮು-ಕಾಶ್ಮೀರ' ಗಡಿ ಪ್ರದೇಶದಲ್ಲಿ ಪಾಕಿಸ್ತಾನ ನಡೆಸಿರುವ ಗುಂಡಿನ ದಾಳಿಯನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ತಾನಕ್ಕೆ ಭಾರತ ಸೇನೆ ತಕ್ಕ ಪಾಠ ಕಲಿಸಲಿದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ. ವಿಶಾಖಪಟ್ಟಣದಲ್ಲಿ ಐ.ಎನ್.ಎಸ್ ಕಮೋತ್ರ ಲೋಕಾರ್ಪಣೆಗೊಳಿಸಿದ ಬಳಿಕ ಪಾಕಿಸ್ತಾನ ನಡೆಸಿರುವ...

ರಕ್ಷಣಾ ಸಚಿವರಿಂದ ಐ.ಎನ್.ಎಸ್ ಕಮೋತ್ರ ಲೋಕಾರ್ಪಣೆ

ದೇಶೀಯವಾಗಿ ನಿರ್ಮಿಸಲಾಗಿರುವ ಗುಪ್ತ ಜಲಾಂತರ್ಗಾಮಿ ವಿರೋಧಿ ಯುದ್ಧ ನೌಕೆ ಐ.ಎನ್.ಎಸ್ ಕಮೋತ್ರವನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ಆ.23ರಂದು ಲೋಕಾರ್ಪಣೆ ಮಾಡಿದರು. ನೌಕೆಯ ಶೇ.90ರಷ್ಟು ಭಾಗ ದೇಶೀಯವಾಗಿಯೇ ನಿರ್ಮಿತವಾಗಿದೆ. ಜಿ.ಆರ್.ಎಸ್.ಇ ಯಿಂದ ನಿರ್ಮಿತವಾಗಿರುವ ನಾಲ್ಕು ಯುದ್ಧನೌಕೆಯಲ್ಲಿ ಐ.ಎನ್.ಎಸ್. ಕಮೋತ್ರ ಅತ್ಯಂತ ಆತ್ಯಾಧುನಿಕವಾಗಿದೆ....

ರಾಜನಾಥ್ ಸಿಂಗ್ ನಿವಾಸ ಭದ್ರತಾ ಗುಣಮಟ್ಟಕ್ಕೆ ಅನುಗುಣವಾಗಿಲ್ಲ!

ಗೃಹ ಸಚಿವ ರಾಜನಾಥ್ ಸಿಂಗ್ ವಾಸಿಸುತ್ತಿರುವ ನಿವಾಸ ಭದ್ರತಾ ಗುಣಮಟ್ಟಕ್ಕೆ ಅನುಗುಣವಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಭದ್ರತಾ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸ್ ಅಧಿಕಾರಿಗಳು, ಗುಪ್ತಚರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದ ಭದ್ರತಾ...

ಚೀನಾ ಅತಿಕ್ರಮಣಕ್ಕೆ ಪ್ರತಿತಂತ್ರ: ಗಡಿ ಭಾಗದಲ್ಲಿ ಆಕಾಶ್ ಕ್ಷಿಪಣಿ ನಿಯೋಜನೆ

'ಭಾರತ-ಚೀನಾ ಗಡಿ' ಭಾಗದಲ್ಲಿ ಭೂಮಿಯಿಂದ ಆಕಾಶಕ್ಕೆ ಜಿಗಿಯುವ( surface-to-air) ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸಲುವ ಮೂಲಕ ಚೀನಾ ಅತಿಕ್ರಮಣವನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಭಾರತದ ಈಶಾನ್ಯ ಭಾಗಗಳಲ್ಲಿ ಆಕಾಶ್ ಕ್ಷಿಪಣಿಗಳೊಂದಿಗೆ ವಾಯುದಳದ ಹೊಸ ಸ್ಕ್ವಾಡ್ರನ್...

ಪ್ರಧಾನಿ ಮೋದಿ-ಹಗೆಲ್ ಭೇಟಿ: ಬೃಹತ್ ರಕ್ಷಣಾ ಒಪ್ಪಂದದ ನಿರೀಕ್ಷೆಯಲ್ಲಿ ಅಮೆರಿಕಾ

ಭಾರತಕ್ಕೆ 3 ದಿನಗಳ ಪ್ರವಾಸ ಕೈಗೊಂಡಿರುವ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಚಕ್ ಹಗೆಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಕ್ಷಣಾ ಸಂಬಂಧಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳ ನಡುವೆ ಇರುವ ರಕ್ಷಣಾ ಬಾಂಧವ್ಯ ವೃದ್ಧಿಗೆ ಮಾತುಕತೆ ವೇಳೆ ಒತ್ತು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited